ಪೂರ್ವ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಆಫ್ರಿಕಾ ಖಂಡದ ಪೂರ್ವ ಭಾಗದ ೧೯ ದೇಶಗಳನ್ನು ಒಳಗೊಂಡಿದೆ. ಈ ದೇಶಗಳೆಂದರೆ ಪೂರ್ವ ಆಫ್ರಿಕಾ ಸಮುದಾಯದ ಸದಸ್ಯರಾದ ಕೀನ್ಯಾ, ಟಾನ್ಜೇನಿಯ, ಬುರುಂಡಿ, ರ್ವಾಂಡ ಮತ್ತು ಉಗಾಂಡ. ಆಫ್ರಿಕಾದ ಕೊಂಬು ಪ್ರದೇಶದ ಡ್ಜಿಬೂಟಿ, ಎರಿಟ್ರಿಯ, ಇಥಿಯೋಪಿಯ ಮತ್ತು ಸೊಮಾಲಿಯ. ಅಫ್ರಿಕಾದ ದಕ್ಷಿಣ ಭಾಗವೆಂದೂ ಪರಿಗಣಿಸಲಾಗುವ ಮೊಜಾಂಬಿಕ್, ಮಾಲಾವಿ, ಜಾಂಬಿಯ, ಜಿಂಬಾಬ್ವೆ ಮತ್ತು ಮಾಡಗಾಸ್ಕರ್. ಹಿಂದೂ ಮಹಾಸಾಗರದ ದ್ವೀಪಗಳಾದ ಕೊಮೊರೊಸ್, ಮಾರಿಷ್ಯಸ್, ಸೆಶೆಲ್ಸ್, ರೆಯುನಿಯನ್ ಮತ್ತು ಮಯೊಟ್.